Posts

Showing posts from May, 2018

ತನ್ನ ಸಂಪತ್ತನ್ನೆಲ್ಲಾ ಬಡವರಿಗಾಗಿ ಧಾರೆ ಎರೆದು ಇಹಲೋಕ ತ್ಯಜಿಸಿದ ಕ್ಯಾನ್ಸರ್ ಪೀಡಿತ ಅಲಿ ಬನಾತ್!

Image
ತನ್ನ ಸಂಪತ್ತನ್ನೆಲ್ಲಾ ಬಡವರಿಗಾಗಿ ಧಾರೆ ಎರೆದು ಇಹಲೋಕ ತ್ಯಜಿಸಿದ ಕ್ಯಾನ್ಸರ್ ಪೀಡಿತ ಅಲಿ ಬನಾತ್! ✍️ಎಸ್.ಎ.ರಹಿಮಾನ್ ಮಿತ್ತೂರು ಅಲಿ ಬನಾತ್.. ಈ ಹೆಸರು ಕೇಳದವರು ಬಹಳ ವಿರಳ. ಆಸ್ಟ್ರೇಲಿಯಾದ ಪ್ರಜೆಯಾದ ಅಲಿ ಬನಾತ್ ಎಂಬ ಯುವಕ ಹುಟ್ಟಿನಿಂದಲೇ ಅಗರ್ಭ ಶ್ರೀಮಂತ. ಧರ್ಮ ನಿಷ್ಠೆಯಿಂದ ಎಲ್ಲರೊಂದಿಗೂ ಸಂತೋಷಮಯವಾಗಿ ನಗುನಗುತ್ತಾ ಜೀವನ ಸಾಗಿಸುತ್ತಾ ಇದ್ದ ಅಲಿ ಬನಾತ್ ಪಾಲಿಗೆ 2015ರಲ್ಲಿ ಒಂದು ಅಘಾತಕಾರಿ ಸುದ್ಧಿ ಕಿವಿಗೆ ಅಪ್ಪಳಿಸುತ್ತದೆ. ಅದುವೇ ತನ್ನನ್ನು ಮರಣದ ಕೂಪಕ್ಕೆ ಕೊಂಡೊಯ್ಯುತ್ತಿರುವ ಕ್ಯಾನ್ಸರ್ ಎಂಬ ಮಾರಕ ರೋಗ ತನ್ನನ್ನು ಆವರಿಸಿರುವ ಸುದ್ಧಿ. ತಾನಿನ್ನು ಕೆಲವೇ ವರ್ಷ ಮಾತ್ರ ಬದುಕಿ ಉಳಿಯಲಿದ್ದೇನೆ ಎಂಬ ವಾಸ್ತವಾಂಶವನ್ನು ಆಸ್ಪತ್ರೆಯ ವೈದ್ಯರು ತನ್ನ ಮುಂದೆ ಬಿಚ್ಚಿಟ್ಟಾಗ ಅಲಿ ಬನಾತ್ ದೃತಿಗೆಡಲಿಲ್ಲ. ಎಲ್ಲವೂ ಅಲ್ಲಾಹನ ಇಚ್ಚೆಯಾಗಿದೆ ಎಂದು ಹೇಳಿ ನಿರಾಳರಾದರು. ತನಗೆ ಹೆಚ್ಚು ದಿನ ಬದುಕಲು ಸಾಧ್ಯವಿಲ್ಲ ಎಂದರಿತ ಅಲಿ ಬನಾತ್ , ಅಂದಿನಿಂದ ಒಂದು ನಿರ್ಧಾರಕ್ಕೆ ಬಂದರು. ಇನ್ನುಮುಂದೆ ತನ್ನಲ್ಲಿರುವ ಹಣವನ್ನು ಬಡವರ ಏಳಿಗೆಗಾಗಿ ವಿನಿಯೋಗಿಸುವುದು ಎಂದು ನಿರ್ಧರಿಸಿದ ಅಲಿ ಬನಾತ್ ‘ಮುಸ್ಲಿಂ ಅರೌಂಡ್ ದಿ ವರ್ಲ್ಡ್’ ಎಂಬ ಚಾರಿಟಿ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಆಫ್ರಿಕಾ ಖಂಡದಲ್ಲಿರುವ ಟೋಗೊ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಹಸಿವೆಯಿಂದ ಸಾವನ್ನಪ್ಪುತ್ತಿರುವುದು ಹಾಗೂ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣಗಳಿಂದ ವಂಚ

ಕರ್ನಾಟಕದ ಸಮಾಜವಾದಿ ಚಳುವಳಿಯ ಕೊನೆಯ ನಾಯಕ ಶ್ರೀ ಸಿದ್ದರಾಮಯ್ಯ

Image
ಕರ್ನಾಟಕದ ಸಮಾಜವಾದೀ ಚಳುವಳಿಯ ಕೊನೆಯ ನಾಯಕ : ಶ್ರೀ ಸಿದ್ದರಾಮಯ್ಯ : ಸ್ವಾತಂತ್ರ್ಯೋತ್ತರ ಭಾರತವು ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುತ್ತಲೇ ಬಂದಿದೆ. ಅನೇಕ ಅಡ್ಡಿ ಆತಂಕಗಳ ನಡುವೆ ನಿರೀಕ್ಷಿಸಿದ ಸಾಧನೆ ಆಗಿಲ್ಲವಾದರೂ ಅದರ ಪರವಾದ ಒಂದು ಧ್ವನಿಯನ್ನು ಅದು ಎಂದೂ ಬಿಟ್ಟುಕೊಟ್ಟಿಲ್ಲ. ಈ ವಿಷಯದಲ್ಲಿ ಕರ್ನಾಟಕವು ಭಾರತದ ಇತರ ರಾಜ್ಯಗಳಿಂದ ತುಂಬ ಮುಂದಿದೆ. ವಚನ ಚಳುವಳಿಯು ಸಾಮಾಜಿಕ ನ್ಯಾಯದ ಕೂಗಿಗೆ ಭದ್ರವಾದ ತಳಹದಿಯನ್ನು 12ನೇ ಶತಮಾನದಷ್ಟು ಹಿಂದೆಯೇ  ಕರ್ನಾಟಕದಲ್ಲಿ ಹಾಕಿಕೊಟ್ಟಿತು. ಜಾತಿಯ ವಿಷಮತೆ, ಲಿಂಗಾಧರಿತ ಸಮಾಜದ ಅಮಾನುಷತೆ ಮತ್ತು ಧಾರ್ಮಿಕ ಡಾಂಭಿಕತೆಗಳ ವಿರುದ್ಧಅವರು ಎತ್ತಿದ ಪ್ರಶ್ನೆಗಳು ಈಗಲೂ ಪ್ರಸ್ತುತ. ಬಳ್ಳಾರಿಯ ಪಾಳೇಗಾರರ ಹೋರಾಟ, ಸುಳ್ಯದ ಕಲ್ಯಾಣಪ್ಪನ ಹೋರಾಟ, ಸಂಗೊಳ್ಳಿ ರಾಯಣ್ಣ, ಹಲಗಲಿಯ ಬೇಡರು , ಅಂಕೋಲದ ಉಪ್ಪಿನ ಸತ್ಯಾಗ್ರಹ , ಕಾಗೋಡು ಸತ್ಯಾಗ್ರಹ, ಸಂಡೂರು ಚಳುವಳಿ, ನರಗುಂದ ರೈತ ಹೋರಾಟ, ಕರ್ನಾಟಕ ರಾಜ್ಯ ರೈತ ಸಂಘ ನಡೆಸಿದ ಚಳುವಳಿ –ಇತ್ಯಾದಿಗಳು ಕರ್ನಾಟಕದ ಸಾಮಾಜಿಕ ಬದ್ಧತೆಯನ್ನು ದೇಶಕ್ಕೆ ಹಾಗೂ ವಿಶ್ವಕ್ಕೆ ಪರಿಸರಿಸಿದ ಅನುಪಮ ಘಟನೆಗಳು. ಮೈಸೂರು ಅರಸರ ಆಳ್ವಿಕೆಯ ಕಾಲದಲ್ಲಿ 1851ರಷ್ಟು ಹಿಂದೆ ಆರಂಭವಾದ ಹಿಂದುಳಿದ ವರ್ಗದವರ ಚಳುವಳಿ ಬೇರೆ ಬೇರೆ ಅವಸ್ಥಾಂತರಗಳನ್ನು ಹೊಂದುತ್ತಾ ಇವತ್ತಿನ ವರೆಗೆ ನಡೆದು ಬಂದಿದೆ. ದಲಿತರು ಅನೇಕ ವೈರುಧ್ಯಗಳ ನಡುವೆಯೂ  ನಿರಂತರವಾಗಿ ತಮ್ಮ ಹೋರಾಟಗಳನ್ನು

ಲವ್ ಜಿಹಾದ್ ಹಿಂದಿನ ಕರಾಳ ಮಾಹಿತಿ ˌಕೋಬ್ರಾ ಪೊಸ್ಟ್ ಕಾರ್ಯಾಚರಣೆಯಲ್ಲಿ ಬಯಲಾದ ಸತ್ಯ.!

Image
' ಲವ್ ಜಿಹಾದ್' ಹಿಂದಿನ ಕರಾಳ ಮಾಹಿತಿ ಬಯಲಾಗಿದೆ. ಕರ್ನಾಟಕವೂ ಸೇರಿ ದೇಶದ ವಿವಿಧ ಭಾಗಗಳಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣ ಹೊರ ಬಿದ್ದಿದೆ. ಕೋಬ್ರಾಪೋಸ್ಟ್ ಮತ್ತು ಗುಲೈಲ್ ತಂಡ ವರ್ಷ ಕಾಲ ನಡೆಸಿದ ರಹಸ್ಯ ಕಾರ್ಯಾಚರಣೆಯನ್ನು ಜಗಜ್ಜಾಹೀರು ಮಾಡಿದ್ದು , ದೆಹಲಿಯಿಂದ ಕರ್ನಾಟಕದವರೆಗಿನ ರಾಜಕಾರಣಿಗಳು, ಸಂಘಪರಿವಾರದ ಮುಖಂಡರು 'ಲವ್ ಜಿಹಾದ್ ಕುರಿತು ಬಾಯಿಬಿಟ್ಟ ವಿಚಾರ ಗಳನ್ನು ವಿಡಿಯೋ ಸಮೇತವಾಗಿ ಕೋಬ್ರಾಪೋಸ್ಟ್ ಪ್ರಕಟಿಸಿದೆ. 'ಆಪರೇಷನ್ ಜೂಲಿಯೆಟ್' ಹೆಸರಿನ ಕುಟುಕು ಕಾರ್ಯಾಚರಣೆಯಲ್ಲಿ ಮಾತ ನಾಡಿರುವ ರಾಜಕಾರಣಿಗಳು, ಸಂಘಪರಿ ವಾರದ ನಾಯಕರು, `ಲವ್ ಜಿಹಾದ್' ಎಂಬ ಪದವನ್ನು ಹೇಗೆ ಸೃಷ್ಟಿಸಲಾಯಿತು, ಅದನ್ನು ಯಾವ ಸಂದರ್ಭಗಳಲ್ಲಿ ಬಳಸಿ ಕೊಳ್ಳಲಾಗುತ್ತದೆ, ಮುಸ್ಲಿಂ ಯುವಕರನ್ನು ಹೇಗೆ ಸುಳ್ಳು ಅತ್ಯಾಚಾರ, ಅಪಹರಣ ಪ್ರಕರಣಗಳಲ್ಲಿ ಸಿಕ್ಕಿಸಿ ಹಾಕಲಾಗುತ್ತದೆ. ಲವ್ ಜಿಹಾದ್ ರಣತಂತ್ರಗಳೇನು? ಲವ್ ಜಿಹಾದ್‍ಗೆ ಸಂಬಂಧಿಸಿ ಹೆಣೆಯಲಾದ ರಣತಂತ್ರಗಳನ್ನು ಬಿಜೆಪಿ, ವಿಎಚ್‍ಪಿ ನಾಯಕರು ಬಾಯಿಬಿಟ್ಟಿದ್ದಾರೆ. ಕೋಬ್ರಾಪೋಸ್ಟ್ ಗುಲೈಲ್ ನಡೆಸಿದ ಸ್ಟಿಂಗ್ ಆಪರೇಷನ್ ವೇಳೆ, ಈ ನಾಯಕರು, ಹಿಂದೂಮುಸ್ಲಿಂ ವೈವಾಹಿಕ ಸಂಬಂಧ ಗಳನ್ನು ಹೇಗೆ ಲವ್‍ಜಿಹಾದ್ ಎಂದು ಅಪ ಪ್ರಚಾರ ಮಾಡಲಾಗುತ್ತದೆ, ಮುಸ್ಲಿಮರನ್ನು ವಿವಾಹವಾದ ಹಿಂದೂ ಯುವತಿಯರನ್ನು ಹೇಗೆ ಮಾತೃಧರ್ಮಕ್ಕೆ ಕರೆತರಲಾಗುತ್ತದೆ, ಹಿಂದೂ ಹುಡುಗಿ ಅಪ

ಲವ್ ಜಿಹಾದ್....!!!

Image
ಲವ್ ಜಿಹಾದ್ ......ಏನಿದು? ಪ್ರತಿಯೊಬ್ಬರೂ ಸಂಘಪರಿವಾರ ಪ್ರೇರಿತ ಮಾದ್ಯಮಗಳ ಮುಖಾಂತರ ಕೇಳಿರುವ ಶಬ್ಧವೇ ಈ " ಲವ್ ಜಿಹಾದ್" ಎನ್ನುವ ಕಟ್ಟು ಕಥೆ ... ಈ ಕಟ್ಟು ಕಥೆಯನ್ನು ಕೇರಳದ ಸಂಘಿಗಳು ಉತ್ಪಾದಿಸಿದರು , ಹಾಗೂ ಅದರ ಪ್ರಚಾರವನ್ನು ಪೇಯ್ಡ್ ಮೀಡಿಯಾಗಳು ಮಾಡತೊಡಗಿದವು , ಸುಳ್ಳನ್ನು 100 ಬಾರಿ ಹೇಳಿ ಸತ್ಯವನ್ನಾಗಿಸಿದರು ! ವಾಸ್ತವದಲ್ಲಿ ಈ " ಲವ್ ಜಿಹಾದ್ " ನ್ನು ಸಂಘಪರಿವಾರಿಗಳು ಉಂಟು ಮಾಡಲು ಕಾರಣ ಏನು ? ಬನ್ನಿ ಉತ್ತರ ಹುಡುಕೋಣ ! ಸುಮಾರು 6 ವರ್ಷಗಳ ಹಿಂದೆ ಇದೇ ಕೇರಳದಲ್ಲಿ ಮುಸ್ಲಿಂ ಯುವತಿಯರನ್ನು ಬ್ರೈನ್ ವಾಶ್ ಮಾಡಿ (ಮಾಟ ಮಂತ್ರ) ಮಾಡಿ , ಮುಸ್ಲಿಂ ಯುವತಿಯರನ್ನು ತಮ್ಮ ಕರಾಳ ಪ್ರೇಮಪಾಶಕ್ಕೆ ಸಿಲುಕಿಸಿ , ನಂತರ ಅವರಿಗೆ ಮಗು ಕರುಣಿಸಿ ಕೈ ಕೊಡುವುದು ಬಹಳ ಹಿಂದಿನಿಂದಲೂ ನಡೆಯುತ್ತಿತ್ತು ! ಆದರೆ ಮುಸ್ಲಿಮರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ ನೋಡಿ ಅದೇ ಇಂದು ಅವರಿಗೆ ಮುಳುವಾಗಿದೆ .... ಹೇಗೆಂದರೆ  ಮುಸ್ಲಿಂ ಸಮುದಾಯದ 10 ಯುವತಿಯರು ಬ್ರೈನ್ ವಾಶ್ ಮುಖಾಂತರ ಹಿಂದೂ ಯುವಕನನ್ನು ಮದುವೆಯಾದ್ರೆ , ಇಲ್ಲಿ ಅಂದ್ರೆ ಹಿಂದೂ ಧರ್ಮದಲ್ಲಿ 1 ಯುವತಿ  ಮುಸ್ಲಿಂ ಧರ್ಮದ ಯುವಕನನ್ನು ಮದುವೆಯಾಗುತ್ತಾಳೆ .... ವಿಶೇಷ ಅಂದ್ರೆ ಇಲ್ಲಿ ಚರ್ಚೆ ಆಗುವುದು 10 ಮುಸ್ಲಿಂ ಹುಡುಗಿಯರು ಹಿಂದೂ ಧರ್ಮಕ್ಕೆ ಹೋದದ್ದಲ್ಲ ! ಬದಲಾಗಿ ಒಂದು ಹಿಂದೂ ಹುಡುಗಿ ಇಸ್ಲಾಂ ಧರ್ಮವನ್ನು ಇಷ್ಟಪಟ್ಟು , ಮುಸ್ಲಿಂ

ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ತಮ್ಮ ಸಹೋದರಿ, ಸೋದರಸೊಸೆ ಮತ್ತಿತರ ಆತ್ಮೀಯರ ಜತೆಗಿರುವ ಚಿತ್ರವನ್ನೇ ಬಳಸಿಕೊಂಡು ಬಿಜೆಪಿ ಅವರ ತೇಜೋವಧೆ ಮಾಡುತ್ತಿರುವುದನ್ನು ಆಲ್ಟ್‌ನ್ಯೂಸ್‌ ವಿಶ್ಲೇಷಣೆಬಯಲಿಗೆಳೆದಿದೆ.

Image
ಬೆಂಗಳೂರು: ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ತಮ್ಮ ಸಹೋದರಿ, ಸೋದರಸೊಸೆ ಮತ್ತಿತರ ಆತ್ಮೀಯರ ಜತೆಗಿರುವ ಚಿತ್ರವನ್ನೇ ಬಳಸಿಕೊಂಡು ಬಿಜೆಪಿ ಅವರ ತೇಜೋವಧೆ ಮಾಡುತ್ತಿರುವುದನ್ನು ಆಲ್ಟ್‌ನ್ಯೂಸ್‌ ವಿಶ್ಲೇಷಣೆಬಯಲಿಗೆಳೆದಿದೆ. ಪಟೇಲ್‌ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಅವರು ನೆಹರು ಡಿಎನ್‌ಎ ಹೊಂದಿದ್ದಾರೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಲವೀಯ ಬುಧವಾರ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ನಲ್ಲಿ ಅವರು ನೆಹರು ಅವರ ಕೆಲವು ಚಿತ್ರಗಳನ್ನೂ ಲಗತ್ತಿಸಿದ್ದರು. ಈ ಚಿತ್ರಗಳ ಬಗ್ಗೆ ಆಲ್ಟ್‌ನ್ಯೂಸ್‌ ವಿಶ್ಲೇಷಣೆ ಮಾಡಿದ್ದು, ನಿಜಾಂಶವೇನೆಂಬುದನ್ನು ವಿವರಿಸಿದೆ. ಈ ಮೇಲಿನ ಚಿತ್ರವು 1949ರಲ್ಲಿ ನೆಹರು ಅವರ ಗಲ್ಲಕ್ಕೆ ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್ ಮುತ್ತಿಕ್ಕಿರುವುದಾಗಿದೆ. ಆ ಸಂದರ್ಭ ವಿಜಯಲಕ್ಷ್ಮಿ ಪಂಡಿತ್ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದರು. ನೆಹರು ಅವರು ಅಲ್ಲಿಗೆ ಭೇಟಿ ನೀಡಿದಾಗ ಅವರನ್ನು ಸ್ವಾಗತಿಸಲು ಬಂದಿದ್ದ ಪಂಡಿತ್‌ ಗಲ್ಲಕ್ಕೆ ಮುತ್ತನ್ನಿತ್ತು ಸ್ವಾಗತಿಸಿದ್ದರು. ಈ ಚಿತ್ರ ನೆಹರು ಅವರು ಎಡ್ವಿನಾ ಮೌಂಟ್‌ಬ್ಯಾಟನ್ ಅವರ ಜತೆ ಲಘು ಹಾಸ್ಯ ಮಾಡಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಮಾಲವೀಯ ಅವರ ಪ್ರಕಾರ ಇದು ತಪ್ಪೇ ಎಂದು ಆಲ್ಟ್‌ನ್ಯೂಸ್ ವಿಶ್ಲೇಷಣೆಯಲ್ಲಿ ಪ್ರಶ್ನಿಸಲಾಗಿದೆ. ಈ ಚಿತ್ರ ಮತ್ತೆ ವಿಜಯಲಕ್ಷ್ಮಿ ಪಂಡಿತ್ ಅವರದ್ದೇ ಆಗಿದೆ. ಅವರು ರಷ್ಯಾದಲ್ಲಿ ರಾಯಭಾರಿಯಾಗಿದ

ಹಾಶಿಂಪುರ ಹತ್ಯಾಕಾಂಡಕ್ಕೆ 31 ವರ್ಷಗಳು.!

Image
ಹಾಶಿಂಪುರ ಹತ್ಯಾಕಾಂಡಕ್ಕೆ 31 ವರ್ಷಗಳು: ಭಾರತದಲ್ಲಿ ಮುಸ್ಲಿಮರು ಸುರಕ್ಷಿತರೇ.? May 22, 1987 ಇತಿಹಾಸ ಕಂಡ ಅತ್ಯಂತ ಕ್ರೂರ ಕಸ್ಟೊಡಿಯಲ್ (ವಿಚಾರಣಾಧೀನ ಕೈದಿಗಳ) ಕಗ್ಗೊಲೆಯಾಗಿದ್ದರೂ ಹಾಶಿಂಪುರ ಹತ್ಯಾಕಾಂಡ ಚರ್ಚೆಯಾಗಿದ್ದು ಬಹಳ ಕಡಿಮೆ. ಸ್ವತಂತ್ರಭಾರತದಲ್ಲಿ, ಪ್ರಜಾಪ್ರಭುತ್ವದ ಅಡಿಯಲ್ಲೇ ಅಸಾಂವಿಧಾನಿಕವಾಗಿ ಈ ಸೇಡಿನ ಕಗ್ಗೊಲೆಗಳು ನಡೆದು ಇಂದಿಗೆ 31 ವರ್ಷಗಳು ತುಂಬಿದವು. ಅದರ ಸಂಭ್ರಮಾಚರಣೆ ಅನ್ನುವಂತೆ ಮುಸ್ಲಿಂ ಪ್ರಜೆಗಳ ಮೇಲೆ ಹತ್ತುಹಲವು ನೆವ ತೆಗೆದು ಹಲ್ಲೆ - ಹತ್ಯೆಗಳನ್ನು ನಡೆಸಲಾಗುತ್ತಿದೆ. ರಂಜಾನ್ ತಿಂಗಳ ಶುಕ್ರವಾರ; ಉಪವಾಸ ಮುರಿಯಲು ಸಿದ್ಧರಾಗಿದ್ದ ಮನೆಯ ಗಂಡಸರನ್ನು ಎಳೆದೊಯ್ದು, ಅವರು ವಾರ ಕಳೆದರೂ ಮರಳದೆಹೋದಾಗ, ಎಂಟನೇ ದಿನ ಕಾಲುವೆಯಲ್ಲಿ ಅವರ ಕೊಳೆತ ಹೆಣಗಳು ಕಂಡಾಗ ಹೇಗಾಗುತ್ತದೆ? ಆ ಹೊತ್ತು ಒಡೆದ ಎದೆಗಳ ಸದ್ದು ಹಾಶಿಂಪುರದಲ್ಲಿ ಇವತ್ತಿಗೂ ಕೇಳಿಸುತ್ತಿದೆ. 1987ರ ಮೇ 22 ರಂದು ಇಂಥದೊಂದು ಸನ್ನಿವೇಶ ಎದುರಿಸಿದ್ದವು ಉತ್ತರಪ್ರದೇಶದ ಹಾಶಿಂಪುರದ ಮುಸ್ಲಿಂ ಕುಟುಂಬಗಳು. ವಿಚಾರಣೆ ನೆವದಲ್ಲಿ ಹೆಚ್ಚೂಕಡಿಮೆ ಊರಿನ ಮುಸ್ಲಿಂ ಗಂಡಸರನ್ನೆಲ್ಲ ಬಲಾತ್ಕಾರವಾಗಿ ವ್ಯಾನ್ಗಳಲ್ಲಿ ತುಂಬಿಸಿ ಕೊಂಡೊಯ್ದ ಪೊಲೀಸ್ ಮತ್ತು ಪ್ರಾಂತೀಯ ಸಶಸ್ತ್ರ ಪಡೆಯ (ಪಿಎಸಿ) ಸಿಬ್ಬಂದಿ 42 ಮಂದಿಯನ್ನು ಕೊಂದುಹಾಕಿದ್ದರು. ಹತ್ಯಾಕಾಂಡ ನಡೆದು 28 ವರ್ಷಗಳು ಕಳೆದ ನಂತರ, 2015ರ ಮಾರ್ಚ್ ತಿಂಗಳಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯವು

ಜಿಹಾದ್ ಎಂದರೇನು..!?

Image
ಜಿಹಾದ್ ಎಂದರೆ ಏನು⁉️ ಓದಲು ಮರೆಯಬೇಡಿ ನಮ್ಮಲ್ಲಿ ಧಾರ್ಮಿಕ ವಿದ್ಯೆಗಾಗಿ “ಮದ್ರಸಾ” ಗಳಿಗೆ ಮಕ್ಕಳನ್ನು ಕಳಿಸುವುದಿದೆ. ಅಲ್ಲಿ ಕುರಾನ್ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಮದರಸಾ ಶಿಕ್ಷಣ ಪಡೆದ ನಾನು ಜಿಹಾದ್ ಪದದ ಕುರಿತು ಯಾರ ಬಾಯಲ್ಲೂ ಕೇಳಿರಲಿಲ್ಲ.  ಪ್ರಪ್ರಥಮವಾಗಿ ಜಿಹಾದ್ ಎನ್ನುವ ಪದ ಕೇಳಿದ್ದು ೨೦೦೧ ರಲ್ಲಿ. ಅಮೆರಿಕೆಯ ಮೇಲೆ ನಡೆದ ಧಾಳಿಯಲ್ಲಿ ಅಮೇರಿಕಾ ಮತ್ತು ಇತರೆ ಪಾಶ್ಚಾತ್ಯ ರಾಷ್ಟ್ರಗಳ ರಾಜಕೀಯ ಪಂಡಿತರುಗಳು ಉಪಯೋಗಿಸಿದ ಪದದಿಂದ ನನಗೆ ಪ್ರಥಮವಾಗಿ ಜಿಹಾದ್ ಪದದ ಪರಿಚಯವಾಯಿತು. ಇನ್ನು ಮುಸ್ಲಿಮರಿಗೆ ಧಾರ್ಮಿಕ ಆಚರಣೆಗಳ ರೀತಿ ಜಿಹಾದ್ ಅನ್ನೂ ಹೇಳಿ ಕೊಟ್ಟು, ಜಿಹಾದ್ ಅಂದರೆ ಯುದ್ಧ, ಸಿಕ್ಕ ಸಿಕ್ಕವರನ್ನು ಕೊಲ್ಲುವುದು ಎಂದಿದ್ದರೆ ವಿಶ್ವ ಈ ರೀತಿಯಲ್ಲಿ ಖಂಡಿತಾ ಇರುತ್ತಿರಲಿಲ್ಲ. ನನಗೂ ಈ ಪದದ ಬಗ್ಗೆ ಅರಿಯಲು ಇಷ್ಟೊಂದು ವರ್ಷಗಳು ಬೇಕಿರಲಿಲ್ಲ.  ೧೭೦ ಕೋಟಿ ಮುಸ್ಲಿಮ್ ಜನಸಂಖ್ಯೆಯಿರುವ ಪ್ರಪಂಚದಲ್ಲಿ ಈ ತೆರನಾದ ನಿರರ್ಥಕ ಹಿಂಸೆಯಲ್ಲಿ ತೊಡಗಿಸಿಕೊಂಡವರು ಕೆಲವೇ ಲಕ್ಷಗಳಷ್ಟು ದುರುಳರು, ಧರ್ಮ ದ್ರೋಹಿಗಳು. ಬಹುಪಾಲು ಮುಸ್ಲಿಮರು ಎಲ್ಲರಂತೆ ದುಡಿಯುತ್ತಾ, ತಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಶ್ರಮ ಪಡುತ್ತಿರುವವರು. ಅವರಿಗೆ ಹಿಂಸೆ ಬೇಕಿಲ್ಲ. ಅವರಿಗೆ ಬೇಕಿರುವುದು ರೋಟಿ, ಕಪಡಾ, ಔರ್ ಮಕಾನ್. ತಿನ್ನಲು ಆಹಾರ, ಉಡಲು ಬಟ್ಟೆ, ಮತ್ತು ತಲೆಯ ಮ