Posts

ಭಯದ ಮಾರಾಟಗಾರ ಟಿವಿ ಆಂಕ್ಯರ್..!

Image
ಭಯದ_ಮಾರಾಟಗಾರ...! ಆಂಕ್ಯರ್ ಅಜಿತ್_ಹನುಮಕ್ಕನವರ್...  ಸುವರ್ಣ ನ್ಯೂಸ್ ನಲ್ಲಿ " ಸೈನಿಕರ ಸಾವು ಮತ್ತು ರಾಜಕೀಯ"( ಪಾಕಿಸ್ತಾನದ ಜೊತೆ ಯುದ್ಧ ನಡೆದರೆ BJP 22 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಹೇಳಿಕೆ ನೀಡಿದ್ದ ಯಡಿಯೂರಪ್ಪ) ಎಂಬ ವಿಷಯದ ಹಿನ್ನೆಲೆಯಲ್ಲಿ ಸಂಜೆ 07-ರಿಂದ 08 ಗಂಟೆ ವರೆಗೆ  ಪ್ಯಾನೆಲ್ ಡಿಸಕ್ಷನ್ ಗೆ ನನ್ನನ್ನು ಕರೆಯಲಾಗಿತ್ತು. 07 ಗಂಟೆಗೆ ನನ್ನ ಜೊತೆಗೆ ಮಾಜಿ ಯೋಧರೊಬ್ಬರು, ಆಂತರಿಕ ಭದ್ರತಾ ಸಲಹೆಗಾರ ....? ಹೆಗಡೆ ಮೂರು ಜನ ಪ್ಯಾನೆಲ್ ಡಿಸಕ್ಷನ್ ನಲ್ಲಿ ಭಾಗವಹಿದ್ದೇವು. 07 ಯಿಂದ 7:50 ವರೆಗೂ ದೆಹಲಿಯಿಂದ Breaking News ಬರುತ್ತಿದೆ ಎಂದು. ನಮ್ಮನ್ನು ಪ್ಯಾನೆಲ್ ನಲ್ಲೇ ಕುರಿಸಿಕೊಂಡು. ಈ ಅಜಿತ್  ವಾಕರಿಕೆ ತರಿಸುವ ರೀತಿಯಲ್ಲಿ  ಅವೇಶದ, ಪ್ರಚೋದಿತಾ.. ಬೆಂಕಿ ಉಗುಳುವ ಬ್ರೇಕಿಂಗ್ ನ್ಯೂಸ್ ವಿಶ್ಲೇಷಣೆ ಶುರು ಮಾಡಿದ. ಆಗಾಗ ಬ್ರೆಕ್ ಮಧ್ಯೆ ತುಂಬಾ ದಣಿದು ನೀರು ಕುಡಿದು ಸುಧಾರಿಸಿಕೊಳ್ಳುವ ಈತ ಸಹಜವಾಗಿ ಸೌಮ್ಯವಾಗಿಯೇ ಇದ್ದಾನೆ.  ಆದರೆ ಉದ್ದೇಶಪೂರ್ವಕವಾಗಿಯೇ ರೋಚಕವಾಗಿ, ಗಟ್ಟಿ ಧ್ವನಿಯಲ್ಲಿ, ಕಿರುಬನ ರೀತಿ ಕಿರಿಚಾಡುತ್ತಾನೆ.ಈತ ಟಿಆರ್ಪಿ ಗಾಗಿ‌ ಅಥವಾ ಯಾವುದೋ ಕೃತಕ ನಿರ್ದೇಶನದಂತೆ  ಸ್ಟೂಡಿಯೋ ದಲ್ಲಿ ಕಿರುಚಾಡುತ್ತಿರುವುದು ಎಂದು ಸಹಜವಾಗಿ ಅರ್ಥವಾಯಿತು. ಈತನು ಬ್ರೇಕಿಂಗ್ ನ್ಯೂಸ್ ನಲ್ಲಿ ಓದುವ  ಸ್ಕ್ರೀಪ್ಟ್ ಗಳು RSS ಕಛೇರಿ ಕೇಶವ ಕೃಪಾ ದಲ್ಲಿ ಸಿದ್ದವಾಗಿ ಬರುತ್ತಿರ

ಜೈಲಿನ ಒಳಗೆ ನಮಾಝ್ ನಿರ್ವಹಿಸಿದ SDPI ಕಾರ್ಯಕರ್ತರು

Image
ಚಾಮರಾಜನಗರದಲ್ಲಿ SDPI  ವತಿಯಿಂದ ಬಾಬರಿ ಮಸೀದಿ ಪುನರ್ ನಿರ್ಮಿಸುವಂತೆ ಒತ್ತಾಯಿಸಿ ಇಂದು ನಡೆದ ಪ್ರತಿಭಟನೆಯಲ್ಲಿ ಜಲ್ಲಾಧ್ಯಕ್ಷರಾದ ಅಬ್ರಾರ್ ಆಹಮದ್ ರವರನ್ನು ಸೇರಿಸಿ ಹಲವಾರು ಕಾರ್ಯಕರ್ತರನ್ನು ಬಂಧಿಸಿದರು ಬಂದಿತ SDPI ಕಾರ್ಯಕರ್ತರು ಜೈಲಿನ ಒಳಗೆ ಮಧ್ಯಾಹ್ನದ ನಮಾಝನ್ನು ನಿರ್ವಹಿಸಿದರು🇵🇹 ಮಸೀದಿಗಾಗಿ ಪ್ರತಿಭಟಿಸುವಾಗ ಬಂಧಿಸಲ್ಪಟ್ಟವರು ಜೈಲನ್ನೇ ನಮಾಝಿಗಾಗಿ ಉಪಯೋಸುವುದರ ಮೂಲಕ ಇತಿಹಾಸ ಬರೆದರು.

ಬಾಬಾ ಸಾಹೇಬರ ಈ 10 ನುಡಿಗಳು ಯಾವುದೇ ಸಮಾಜವನ್ನು ಬದಲಾಯಿಸಬಲ್ಲವು!

Image
ಜೀವನಕ್ಕೆ ಸ್ಫೂರ್ತಿ ನೀಡುವಂತಹ ಭಾರತದ ಈ ಮಹಾನ್ ವ್ಯಕ್ತಿಯ ಹತ್ತು ವಿಷಯಗಳನ್ನು ನಾವು ತಿಳಿಯೋಣ... 1. ವಿದ್ಯಾವಂತರಾಗಿರಿ! ಸಂಘಟಿತವಾಗಿರಿ! ಹೋರಾಟ ಮಾಡಿ. 2. ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವವನ್ನು ಕಲಿಸುವ ಧರ್ಮವನ್ನು ನಾನು ನಂಬುತ್ತೇನೆ. 3. ಜೀವನವು ಸುದೀರ್ಘವಾಗಿ ಬದಲಾಗಿ ಉತ್ತಮವಾಗಿರಬೇಕು. 4. ಒಬ್ಬ ಮಹಾನ್ ವ್ಯಕ್ತಿಯು ಖ್ಯಾತ ವ್ಯಕ್ತಿಯಿಂದ ಭಿನ್ನವಾಗಿರುತ್ತಾನೆ, ಏಕೆಂದರೆ ಅವರು ಸಮಾಜದ ಸೇವಕರಾಗಲು ಸಿದ್ಧರಾಗಿದ್ದಾರೆ. 5. ಮನಸ್ಸಿನ ಅಭಿವೃದ್ಧಿ ಮಾನವ ಅಸ್ತಿತ್ವದ ಅಂತಿಮ ಗುರಿಯಾಗಿರಬೇಕು. 6. ನಾವು ಮೊದಲು ಮತ್ತು ಕೊನೆಯವರು ಭಾರತೀಯರು. 7. ತಾರತಮ್ಯ, ಕಾರಣ ಮತ್ತು ಹಿಂದೂ ಧರ್ಮದಲ್ಲಿ ಸ್ವತಂತ್ರ ಚಿಂತನೆಯ ಅಭಿವೃದ್ಧಿಗೆ ಯಾವುದೇ ವ್ಯಾಪ್ತಿ ಇಲ್ಲ. 8. ಮಾನವರು ನಶ್ವರನಾಗಿದ್ದಾನೆ. ಇಂತಹ ವಿಚಾರಗಳಿವೆ. ಸಸ್ಯವೊಂದರಲ್ಲಿ ನೀರಿನ ಅಗತ್ಯವಿರುವಂತೆ ಒಂದು ಕಲ್ಪನೆಗೆ ಪ್ರಸರಣ ಅಗತ್ಯವಿದೆ. ಇಲ್ಲದಿದ್ದರೆ ಎರಡೂ ಕತ್ತರಿಸಿ ಸಾಯುತ್ತವೆ. 9. ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ಸಮುದಾಯದ ಪ್ರಗತಿಯ ಮಾಪನ ನಾನು ಮಾಡುತ್ತೇನೆ. 10. ನೀತಿಶಾಸ್ತ್ರ ಮತ್ತು ಅರ್ಥಶಾಸ್ತ್ರದ ನಡುವೆ ಘರ್ಷಣೆ ಉಂಟಾದಾಗ, ಅರ್ಥಶಾಸ್ತ್ರಕ್ಕೆ ಯಾವಾಗಲೂ ಜಯವಿದೆ ಎಂದು ಇತಿಹಾಸವು ನಮಗೆ ಹೇಳುತ್ತದೆ. ಸಾಕಷ್ಟು ಬಲವನ್ನು ಬಲವಂತಪಡಿಸದ ಹೊರತು ಸ್ವಯಂಪ್ರೇರಿತ ಹಿತಾಸಕ್ತಿಗಳನ್ನು ಸ್ವಯಂಪ್ರೇರಣೆಯಿಂದ ಬಿಡಲಾಗುವುದಿಲ್ಲ.

ಪ್ರವಾದಿ ಮೊಹಮ್ಮದರನ್ನು ನಿಂದಿಸುವ ಮೊದಲು ರಸೂಲರ ಬಗ್ಗೆ ಅಜಿತ್ ನೀನು ಎಷ್ಟು ಅಧ್ಯಯನ ನಡೆಸಿದ್ದೀಯ

Image
ಪ್ರವಾದಿ ಮೊಹಮ್ಮದರನ್ನು ನಿಂದಿಸುವ ಮೊದಲು ರಸೂಲರ ಬಗ್ಗೆ ಅಜಿತ್ ತಾವು ಎಷ್ಟು ಅಧ್ಯಯನ ನಡೆಸಿದ್ದೀರಿ?, ಸ್ವಲ್ಪ ನಿಮ್ಮದೇ ಚಾನಲ್ ನಲ್ಲಿ ವಿವರಿಸಿ. ಒಂದೋ ಪ್ರಾಮಾಣಿಕ  ಅಧ್ಯಯನ ನಡೆಸಿ ರಸೂಲರ ಜೀವನವನ್ನು ವಿವರಿಸುವ ಒಂದು ಪುಸ್ತಕ ಬರೆಯಿರಿ. ನಿಮಗಿದು ಬಹಿರಂಗ ಸವಾಲು. ಅಧ್ಯಯನ ನಡೆಸುವ ಶಕ್ತಿಯಿಲ್ಲದಿದ್ದರೆ ನೀವು ಯಾವ ವಿಚಾರವನ್ನಿಟ್ಟುಕೊಂಡು ನಿಂದಿಸಿದ್ದೀರೋ ಆ ವಿಚಾರದ ಕುರಿತಾದ್ರೂ ಬಲ್ಲವರಿಂದ ತಿಳಿದು ಜ್ಞಾನ ಹೆಚ್ಚಿಸಿಕೊಳ್ಳಿ. ನಿಮ್ಮ ಅವಿವೇಕತನದ ಆವೇಶಕ್ಕೆ ನಾಲಿಗೆ ಕೊಟ್ಟರೆ ಅದರಿಂದ ಯಾವ ದೇಶವೂ ಉದ್ಧಾರವಾಗೋದಿಲ್ಲ. ಪ್ರವಾದಿ( ಸ.ಅ) ರ ಪ್ರತಿಯೊಂದು ವಿವಾಹವೂ ಅಲ್ಲಾಹನ ಇಚ್ಛೆಯಂತೆ ನಡೆದಿದೆಯೇ ಹೊರೆತು ಪ್ರವಾದಿಯ ಬಯಕೆಯಿಂದಲ್ಲ ಎಂಬುವುದು ಇಸ್ಲಾಂ ಇತಿಹಾಸ ಸಾರಿ ಹೇಳುತ್ತದೆ. ಪ್ರವಾದಿಯ ಮೊದಲ ಮದುವೆ ನಡೆದಿರೋದು ಅವರ ೨೫ ನೇ ವಯಸ್ಸಿನಲ್ಲಿ. ಮೊದಲ ಪತ್ನಿ ಖದೀಜಾ(ರ.ಅ) ಮಕ್ಕಾದ ಶ್ರೀಮಂತ ವ್ಯಾಪಾರಿ ವಿಧವೆ. ಅವರಿಗೆ ದೇವ ಸಂದೇಶಗಳು ಬರ ತೊಡಗಿದ್ದು ೪೦ ನೇ ಪ್ರಾಯದಲ್ಲಿ. ಎರಡನೇ ಮದುವೆ ನಡೆದಿರೋದು ೫೦ ನೇ ವರ್ಷದಲ್ಲಿ , ಮತ್ತೆ ವರಿಸಿದ್ದು ಸೌದಾ ಎಂಬ ವಿಧವೆಯನ್ನು. ಇದರ ನಂತರದಲ್ಲಿ ೫೦ ರಿಂದ ೬೩ನೇ ವಯಸ್ಸಿನ ಒಳಗೆ ನಡೆದ ಮದುವೆಗಳಲ್ಲಿ ವರಿಸಿದ್ದು ವಿಧವೆಯರನ್ನೇ. ಎಲ್ಲರೂ ಕೂಡ ಹಿರಿ ವಯಸ್ಸಿನ ವಿಧವೆಯರು. ರಸೂಲರು ಮದುವೆಯಾದ ಕನ್ಯೆ ಸ್ತ್ರೀ ಅದು ಹಝ್ರತ್ ಆಯಿಷಾ(ರ.ಅ). ಮಾತ್ರ. ಚರ್ಚೆಯ ವಿಷಯಕ್ಕೆ ಬರೋಣ. ರಸೂಲರ ೫೩ನೇ ವ

ಬಾಬರಿ ಮಸೀದಿ ದ್ವಂಸದಲ್ಲಿ ಪಾಲ್ಗೊಂಡಿದ್ದ ಕರಸೇವಕರಿಂದ ಈಗ ಇಸ್ಲಾಂ ಧರ್ಮ ಪ್ರಚಾರ ಮಸೀದಿಗಳ ನಿರ್ಮಾಣ

Image
ಜಗತ್ತಿನ ಮುಂದೆ ಭಾರತವನ್ನು ತಲೆ ತಗ್ಗಿಸುವಂತೆ ಮಾಡಿದ ಬಾಬರೀ ಮಸೀದಿಯ ಧ್ವಂಸದಲ್ಲಿ ಪಾಲ್ಗೊಂಡಿದ್ದ ಸಂಘಪರಿವಾರದ ಮಾಜಿ ಕಾರ್ಯಕರ್ತ ಈಗ ಇಸ್ಲಾಂ ಧರ್ಮದ ಪ್ರಚಾರ ಹಾಗೂ ಮಸೀದಿ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕರಸೇವಕನಾಗಿದ್ದ ಬಲ್ಬೀರ್ ಸಿಂಗ್ ಇದೀಗ ಮೊಹಮ್ಮದ್ ಆಮಿರ್ ಆಗಿದ್ದಾರೆ. ಹರಿಯಾಣದ ಪಾಣಿಪತ್ ನ ಹಳ್ಳಿಯೊಂದರಲ್ಲಿ ಗಾಂಧಿವಾದಿ, ಜಾತ್ಯತೀತ ಕುಟುಂಬವೊಂದರಲ್ಲಿ ಜನಿಸಿದ ಬಲ್ಬೀರ್ ಸಿಂಗ್, ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆಯಿಂದ ಪ್ರೇರಿತರಾಗಿ ಶಿವಸೇನೆ ಸೇರಿಕೊಂಡಿದ್ದರು. ಸಂಘಪರಿವಾರದ ಸಿದ್ಧಾಂತದಲ್ಲಿ ಒಲವು ತೋರಿಸಿದ ಬಲ್ಬೀರ್ ನಂತರ ಆರೆಸ್ಸೆಸ್ ಸೇರಿಕೊಂಡು ಪ್ರತಿದಿನ ಆರೆಸ್ಸೆಸ್ ಶಾಖೆಯಲ್ಲಿ ಪಾಲ್ಗೊಳ್ಳುತ್ತಿದ್ದರು. 1992ರ ಡಿಸೆಂಬರ್ 6ರಂದು ಅಯೋಧ್ಯೆ ತಲುಪಿದ ಬಲ್ಬೀರ್ ಸಿಂಗ್, ಬಾಬರೀ ಮಸೀದಿಯ ಗುಂಬಝ್ ಹತ್ತಿದ ಮೊದಲನೆಯ ಕರಸೇವಕರಾಗಿದ್ದರು. ಬಲ್ಬೀರ್ ಪ್ರಕಾರ, ಪಾಣಿಪತ್ ಹಾಗೂ ಸೋನಿಪತ್ ನ ಕರಸೇವಕರು ಬಾಬರೀ ಮಸೀದಿಯ ಗುಂಬಝ್ ಧ್ವಂಸ ಮಾಡಿದ್ದರು. ತಾನು ಮಸೀದಿ ಧ್ವಂಸದ ನಂತರ ಊರಿಗೆ ಮರಳಿದಾಗ ತನನ್ನು ಒಬ್ಬ ‘ಹೀರೋ’ ಎಂಬಂತೆ ಬಿಂಬಿಸಿದರು ಎಂದು ಅಮೀರ್ ಹೇಳುತ್ತಾರೆ. ಆದರೆ, ಮನೆಗೆ ತಲುಪಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಅವರ ಕುಟುಂಬವು ಅವರನ್ನು ದೂರ ಮಾಡಿತು. ರಾಜಪೂತ ಕುಟುಂಬದಲ್ಲಿ ಜನಿಸಿದ ಬಲ್ಬೀರ್ ಸಿಂಗ್, ನಂತರ ತನ್ನ ತಪ್ಪಿನ ಅರಿವಾಗಿ, ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು. ಇದೀಗ ಮುಸ್ಲ

ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ನಾಡಿಗೆ ಬಗೆವ ದ್ರೋಹ: ಸಿದ್ದರಾಮಯ್ಯ

Image
ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ನಾಡಿಗೆ ಬಗೆವ ದ್ರೋಹ: ಸಿದ್ದರಾಮಯ್ಯ ‘ ಟಿಪ್ಪು ಸುಲ್ತಾನ್ ಒಬ್ಬ ದೇಶಪ್ರೇಮಿ, ಜಾತ್ಯತೀತ, ಮತ್ತು ಜನಪರ ಅರಸನಾಗಿದ್ದ’ ಟಿಪ್ಪು ಜಯಂತಿ ಆಚರಣೆ ಬಗ್ಗೆ ಬಿಜೆಪಿ ನಿಲುವು ಆತ್ಮವಂಚನೆಯಿಂದ ಕೂಡಿದ್ದಾಗಿದೆ. ಟಿಪ್ಪು ವಿರೋಧಿಗಳಿಗೆ ನಿಜವಾದ ಟಿಪ್ಪು ಸುಲ್ತಾನ್ ಕಾಣಬೇಕಾದರೆ ಕೋಮುವಾದದ ಕನ್ನಡಕ ಕಳಚಿಟ್ಟು ನೋಡಬೇಕಾಗುತ್ತದೆ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನನ್ನು ದೇಶಕ್ಕೆ ಅರ್ಪಿಸಿದ ಟಿಪ್ಪು ಸುಲ್ತಾನರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಟಿಪ್ಪುವಿಗೆ ಮಾತ್ರವಲ್ಲ ಈ ನಾಡಿಗೆ ಬಗೆವ ದ್ರೋಹ ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. ನವೆಂಬರ್ 10, ಟಿಪ್ಪು ಜಯಂತಿಯ ಬಗ್ಗೆ ತನ್ನ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ‘ರಾಜ್ಯ ಸರ್ಕಾರ ಆಚರಿಸುತ್ತಿರುವುದು ಯಾವುದೇ ಒಂದು ಧರ್ಮಕ್ಕೆ ಸೇರಿದ ನಾಯಕನ ಜಯಂತಿಯಲ್ಲ’ ಎಂದು ರಾಜ್ಯದಲ್ಲಿ ಟಿಪ್ಪು ಜಯಂತಿಯನ್ನು ವಿವಾದದಂತೆ ಮಾಡಿರುವ ಬಿಜೆಪಿ ಮತ್ತು ಅದರ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ. ಒಬ್ಬ ದೇಶಪ್ರೇಮಿ, ಜಾತ್ಯತೀತ, ಮತ್ತು ಜನಪರ ಅರಸನಾಗಿದ್ದ ಟಿಪ್ಪುವಿನ ಜಯಂತಿ ಆಚರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಟಿಪ್ಪುವಿಗೆ ಮಾತ್ರವಲ್ಲ ಈ ನಾಡಿಗೆ ಬಗೆವ ದ್ರೋಹವೆಂದೂ ಹೇಳಿದ್ದಾರೆ.

ಇತಿಹಾಸ ಮರೆತ ಟಿಪ್ಪುವಿನ ಹಿಂದೂ ವೀರ ಸಂಗಾತಿಗಳು

Image
ಇತಿಹಾಸ ಮರೆತ ಟಿಪ್ಪುವಿನ ಹಿಂದೂ ವೀರ ಸಂಗಾತಿಗಳು... ಟಿಪ್ಪು ಸುಲ್ತಾನರ ಕೊನೆಯ ಯುದ್ಧ ಅರ್ಥಾತ್ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಇಂಚಿಂಚೂ ಬಿಡದೆ ಬ್ರಿಟಿಷ್ ಮತ್ತು ಫ್ರೆಂಚ್ ಇತಿಹಾಸಕಾರರು ಪ್ರತಿಯೊಂದನ್ನೂ ದಾಖಲಿಸಿದ್ದಾರೆ. ಟಿಪ್ಪುವಿನ ಬಗ್ಗೆ ಅತ್ಯಂತ ಮಹತ್ವದ ಚಾರಿತ್ರಿಕ ಕಾದಂಬರಿ ‘ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್’ ಬರೆದ ಭಗವಾನ್ ಶ್ಯಾಮದಾಸ್ ಗಿದ್ವಾನಿ ಅದಕ್ಕಾಗಿ ಅತೀ ಹೆಚ್ಚು ಅಧ್ಯಯನ ನಡೆಸಿದ್ದು ಫ್ರೆಂಚ್ ಮತ್ತು ಬ್ರಿಟಿಷ್ ಇತಿಹಾಸ ಗ್ರಂಥಗಳನ್ನಾಗಿದೆ. ಗಿದ್ವಾನಿ ಬರೆದಿದ್ದು ಒಂದು ಚಾರಿತ್ರಿಕ ಕಾದಂಬರಿಯಾದರೂ ಅವರು ಅದಕ್ಕೆ ಮಸಾಲೆ ತುಂಬಿಸುವ ಕೆಲಸ ಮಾಡಿಲ್ಲ ಎಂಬುವುದಕ್ಕೆ ಅವರು ಬಳಸಿದ ದಾಖಲೆಗಳೇ ಸಾಕ್ಷ್ಯ ಒದಗಿಸುತ್ತವೆ. ನಮ್ಮಲ್ಲಿ ಒಂದೋ ಟಿಪ್ಪುವನ್ನು ಅತಿಯಾಗಿ ವೈಭವೀಕರಿಸಲಾಗುತ್ತದೆ ಅಥವಾ ಅತಿಯಾಗಿ ದೂಷಿಸಲಾಗುತ್ತದೆ. ಇವೆರಡರ ಮಧ್ಯೆ ಹುದುಗಿರುವ ಸತ್ಯಗಳು ಅನೇಕ ಸಂದರ್ಭಗಳಲ್ಲಿ ಮಸುಕಾಗಿಬಿಡುವ ಸಾಧ್ಯತೆಗಳಿವೆ. ನಾವು ಟಿಪ್ಪುವಿಗೆ ದ್ರೋಹ ಬಗೆದ ಪೂರ್ಣಯ್ಯ ಮತ್ತು ಮೀರ್ ಸಾದಿಖರನ್ನು ಋಣಾತ್ಮಕ ಕಾರಣಗಳಿಗಾಗಿಯಾದರೂ ಆಗಾಗ ನೆನಪಿಸಿಕೊಳ್ಳುತ್ತೇವೆ ಆದರೆ ಟಿಪ್ಪುವಿಗಾಗಿ ಮತ್ತು ನಾಡಿಗಾಗಿ ಹೋರಾಡಿ ವೀರಮರಣವನ್ನಪ್ಪಿದ ಅದೆಷ್ಟೋ ಮಂದಿಗಳ ಹೆಸರು ಇತಿಹಾಸ ಗರ್ಭದಲ್ಲಿ ಹೂತು ಹೋಗಿವೆ. ಹಾಗೆ ಹುತಾತ್ಮರಾದ ಇಬ್ಬರು ವೀರಯೋಧರ ಕೊನೆಯ ಕ್ಷಣದ ಹೋರಾಟದ ಝಲಕ್ ಗಳನ್ನು ಇಲ್ಲಿ ದಾಖಲಿಸುತ್ತೇನೆ. ಮೀರ್ ಸಾದಿಖ್ ಮತ್