Posts

Showing posts from December, 2018

ಪ್ರವಾದಿ ಮೊಹಮ್ಮದರನ್ನು ನಿಂದಿಸುವ ಮೊದಲು ರಸೂಲರ ಬಗ್ಗೆ ಅಜಿತ್ ನೀನು ಎಷ್ಟು ಅಧ್ಯಯನ ನಡೆಸಿದ್ದೀಯ

Image
ಪ್ರವಾದಿ ಮೊಹಮ್ಮದರನ್ನು ನಿಂದಿಸುವ ಮೊದಲು ರಸೂಲರ ಬಗ್ಗೆ ಅಜಿತ್ ತಾವು ಎಷ್ಟು ಅಧ್ಯಯನ ನಡೆಸಿದ್ದೀರಿ?, ಸ್ವಲ್ಪ ನಿಮ್ಮದೇ ಚಾನಲ್ ನಲ್ಲಿ ವಿವರಿಸಿ. ಒಂದೋ ಪ್ರಾಮಾಣಿಕ  ಅಧ್ಯಯನ ನಡೆಸಿ ರಸೂಲರ ಜೀವನವನ್ನು ವಿವರಿಸುವ ಒಂದು ಪುಸ್ತಕ ಬರೆಯಿರಿ. ನಿಮಗಿದು ಬಹಿರಂಗ ಸವಾಲು. ಅಧ್ಯಯನ ನಡೆಸುವ ಶಕ್ತಿಯಿಲ್ಲದಿದ್ದರೆ ನೀವು ಯಾವ ವಿಚಾರವನ್ನಿಟ್ಟುಕೊಂಡು ನಿಂದಿಸಿದ್ದೀರೋ ಆ ವಿಚಾರದ ಕುರಿತಾದ್ರೂ ಬಲ್ಲವರಿಂದ ತಿಳಿದು ಜ್ಞಾನ ಹೆಚ್ಚಿಸಿಕೊಳ್ಳಿ. ನಿಮ್ಮ ಅವಿವೇಕತನದ ಆವೇಶಕ್ಕೆ ನಾಲಿಗೆ ಕೊಟ್ಟರೆ ಅದರಿಂದ ಯಾವ ದೇಶವೂ ಉದ್ಧಾರವಾಗೋದಿಲ್ಲ. ಪ್ರವಾದಿ( ಸ.ಅ) ರ ಪ್ರತಿಯೊಂದು ವಿವಾಹವೂ ಅಲ್ಲಾಹನ ಇಚ್ಛೆಯಂತೆ ನಡೆದಿದೆಯೇ ಹೊರೆತು ಪ್ರವಾದಿಯ ಬಯಕೆಯಿಂದಲ್ಲ ಎಂಬುವುದು ಇಸ್ಲಾಂ ಇತಿಹಾಸ ಸಾರಿ ಹೇಳುತ್ತದೆ. ಪ್ರವಾದಿಯ ಮೊದಲ ಮದುವೆ ನಡೆದಿರೋದು ಅವರ ೨೫ ನೇ ವಯಸ್ಸಿನಲ್ಲಿ. ಮೊದಲ ಪತ್ನಿ ಖದೀಜಾ(ರ.ಅ) ಮಕ್ಕಾದ ಶ್ರೀಮಂತ ವ್ಯಾಪಾರಿ ವಿಧವೆ. ಅವರಿಗೆ ದೇವ ಸಂದೇಶಗಳು ಬರ ತೊಡಗಿದ್ದು ೪೦ ನೇ ಪ್ರಾಯದಲ್ಲಿ. ಎರಡನೇ ಮದುವೆ ನಡೆದಿರೋದು ೫೦ ನೇ ವರ್ಷದಲ್ಲಿ , ಮತ್ತೆ ವರಿಸಿದ್ದು ಸೌದಾ ಎಂಬ ವಿಧವೆಯನ್ನು. ಇದರ ನಂತರದಲ್ಲಿ ೫೦ ರಿಂದ ೬೩ನೇ ವಯಸ್ಸಿನ ಒಳಗೆ ನಡೆದ ಮದುವೆಗಳಲ್ಲಿ ವರಿಸಿದ್ದು ವಿಧವೆಯರನ್ನೇ. ಎಲ್ಲರೂ ಕೂಡ ಹಿರಿ ವಯಸ್ಸಿನ ವಿಧವೆಯರು. ರಸೂಲರು ಮದುವೆಯಾದ ಕನ್ಯೆ ಸ್ತ್ರೀ ಅದು ಹಝ್ರತ್ ಆಯಿಷಾ(ರ.ಅ). ಮಾತ್ರ. ಚರ್ಚೆಯ ವಿಷಯಕ್ಕೆ ಬರೋಣ. ರಸೂಲರ ೫೩ನೇ ವ

ಬಾಬರಿ ಮಸೀದಿ ದ್ವಂಸದಲ್ಲಿ ಪಾಲ್ಗೊಂಡಿದ್ದ ಕರಸೇವಕರಿಂದ ಈಗ ಇಸ್ಲಾಂ ಧರ್ಮ ಪ್ರಚಾರ ಮಸೀದಿಗಳ ನಿರ್ಮಾಣ

Image
ಜಗತ್ತಿನ ಮುಂದೆ ಭಾರತವನ್ನು ತಲೆ ತಗ್ಗಿಸುವಂತೆ ಮಾಡಿದ ಬಾಬರೀ ಮಸೀದಿಯ ಧ್ವಂಸದಲ್ಲಿ ಪಾಲ್ಗೊಂಡಿದ್ದ ಸಂಘಪರಿವಾರದ ಮಾಜಿ ಕಾರ್ಯಕರ್ತ ಈಗ ಇಸ್ಲಾಂ ಧರ್ಮದ ಪ್ರಚಾರ ಹಾಗೂ ಮಸೀದಿ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕರಸೇವಕನಾಗಿದ್ದ ಬಲ್ಬೀರ್ ಸಿಂಗ್ ಇದೀಗ ಮೊಹಮ್ಮದ್ ಆಮಿರ್ ಆಗಿದ್ದಾರೆ. ಹರಿಯಾಣದ ಪಾಣಿಪತ್ ನ ಹಳ್ಳಿಯೊಂದರಲ್ಲಿ ಗಾಂಧಿವಾದಿ, ಜಾತ್ಯತೀತ ಕುಟುಂಬವೊಂದರಲ್ಲಿ ಜನಿಸಿದ ಬಲ್ಬೀರ್ ಸಿಂಗ್, ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆಯಿಂದ ಪ್ರೇರಿತರಾಗಿ ಶಿವಸೇನೆ ಸೇರಿಕೊಂಡಿದ್ದರು. ಸಂಘಪರಿವಾರದ ಸಿದ್ಧಾಂತದಲ್ಲಿ ಒಲವು ತೋರಿಸಿದ ಬಲ್ಬೀರ್ ನಂತರ ಆರೆಸ್ಸೆಸ್ ಸೇರಿಕೊಂಡು ಪ್ರತಿದಿನ ಆರೆಸ್ಸೆಸ್ ಶಾಖೆಯಲ್ಲಿ ಪಾಲ್ಗೊಳ್ಳುತ್ತಿದ್ದರು. 1992ರ ಡಿಸೆಂಬರ್ 6ರಂದು ಅಯೋಧ್ಯೆ ತಲುಪಿದ ಬಲ್ಬೀರ್ ಸಿಂಗ್, ಬಾಬರೀ ಮಸೀದಿಯ ಗುಂಬಝ್ ಹತ್ತಿದ ಮೊದಲನೆಯ ಕರಸೇವಕರಾಗಿದ್ದರು. ಬಲ್ಬೀರ್ ಪ್ರಕಾರ, ಪಾಣಿಪತ್ ಹಾಗೂ ಸೋನಿಪತ್ ನ ಕರಸೇವಕರು ಬಾಬರೀ ಮಸೀದಿಯ ಗುಂಬಝ್ ಧ್ವಂಸ ಮಾಡಿದ್ದರು. ತಾನು ಮಸೀದಿ ಧ್ವಂಸದ ನಂತರ ಊರಿಗೆ ಮರಳಿದಾಗ ತನನ್ನು ಒಬ್ಬ ‘ಹೀರೋ’ ಎಂಬಂತೆ ಬಿಂಬಿಸಿದರು ಎಂದು ಅಮೀರ್ ಹೇಳುತ್ತಾರೆ. ಆದರೆ, ಮನೆಗೆ ತಲುಪಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಅವರ ಕುಟುಂಬವು ಅವರನ್ನು ದೂರ ಮಾಡಿತು. ರಾಜಪೂತ ಕುಟುಂಬದಲ್ಲಿ ಜನಿಸಿದ ಬಲ್ಬೀರ್ ಸಿಂಗ್, ನಂತರ ತನ್ನ ತಪ್ಪಿನ ಅರಿವಾಗಿ, ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದರು. ಇದೀಗ ಮುಸ್ಲ