ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ತಮ್ಮ ಸಹೋದರಿ, ಸೋದರಸೊಸೆ ಮತ್ತಿತರ ಆತ್ಮೀಯರ ಜತೆಗಿರುವ ಚಿತ್ರವನ್ನೇ ಬಳಸಿಕೊಂಡು ಬಿಜೆಪಿ ಅವರ ತೇಜೋವಧೆ ಮಾಡುತ್ತಿರುವುದನ್ನು ಆಲ್ಟ್‌ನ್ಯೂಸ್‌ ವಿಶ್ಲೇಷಣೆಬಯಲಿಗೆಳೆದಿದೆ.

ಬೆಂಗಳೂರು: ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರು ತಮ್ಮ ಸಹೋದರಿ, ಸೋದರಸೊಸೆ ಮತ್ತಿತರ ಆತ್ಮೀಯರ ಜತೆಗಿರುವ ಚಿತ್ರವನ್ನೇ ಬಳಸಿಕೊಂಡು ಬಿಜೆಪಿ ಅವರ ತೇಜೋವಧೆ ಮಾಡುತ್ತಿರುವುದನ್ನು ಆಲ್ಟ್‌ನ್ಯೂಸ್‌ ವಿಶ್ಲೇಷಣೆಬಯಲಿಗೆಳೆದಿದೆ.

ಪಟೇಲ್‌ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಅವರು ನೆಹರು ಡಿಎನ್‌ಎ ಹೊಂದಿದ್ದಾರೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಲವೀಯ ಬುಧವಾರ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ನಲ್ಲಿ ಅವರು ನೆಹರು ಅವರ ಕೆಲವು ಚಿತ್ರಗಳನ್ನೂ ಲಗತ್ತಿಸಿದ್ದರು.

ಈ ಚಿತ್ರಗಳ ಬಗ್ಗೆ ಆಲ್ಟ್‌ನ್ಯೂಸ್‌ ವಿಶ್ಲೇಷಣೆ ಮಾಡಿದ್ದು, ನಿಜಾಂಶವೇನೆಂಬುದನ್ನು ವಿವರಿಸಿದೆ.

ಈ ಮೇಲಿನ ಚಿತ್ರವು 1949ರಲ್ಲಿ ನೆಹರು ಅವರ ಗಲ್ಲಕ್ಕೆ ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್ ಮುತ್ತಿಕ್ಕಿರುವುದಾಗಿದೆ. ಆ ಸಂದರ್ಭ ವಿಜಯಲಕ್ಷ್ಮಿ ಪಂಡಿತ್ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದರು. ನೆಹರು ಅವರು ಅಲ್ಲಿಗೆ ಭೇಟಿ ನೀಡಿದಾಗ ಅವರನ್ನು ಸ್ವಾಗತಿಸಲು ಬಂದಿದ್ದ ಪಂಡಿತ್‌ ಗಲ್ಲಕ್ಕೆ ಮುತ್ತನ್ನಿತ್ತು ಸ್ವಾಗತಿಸಿದ್ದರು.

ಈ ಚಿತ್ರ ನೆಹರು ಅವರು ಎಡ್ವಿನಾ ಮೌಂಟ್‌ಬ್ಯಾಟನ್ ಅವರ ಜತೆ ಲಘು ಹಾಸ್ಯ ಮಾಡಿದ್ದಕ್ಕೆ ಸಂಬಂಧಿಸಿದ್ದಾಗಿದೆ. ಮಾಲವೀಯ ಅವರ ಪ್ರಕಾರ ಇದು ತಪ್ಪೇ ಎಂದು ಆಲ್ಟ್‌ನ್ಯೂಸ್ ವಿಶ್ಲೇಷಣೆಯಲ್ಲಿ ಪ್ರಶ್ನಿಸಲಾಗಿದೆ.

ಈ ಚಿತ್ರ ಮತ್ತೆ ವಿಜಯಲಕ್ಷ್ಮಿ ಪಂಡಿತ್ ಅವರದ್ದೇ ಆಗಿದೆ. ಅವರು ರಷ್ಯಾದಲ್ಲಿ ರಾಯಭಾರಿಯಾಗಿದ್ದಾಗ ಭಾರತಕ್ಕೆ ಬಂದಿದ್ದ ವೇಳೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ನೆಹರು ಹೀಗೆ ಸ್ವಾಗತಿಸಿದ್ದರು.

ಇದು ನೆಹರು ಅವರು ಧೂಮಪಾನ ಮಾಡುತ್ತಿರುವ ಚಿತ್ರ. ಇದಕ್ಕೂ, ನೆಹರು ಮತ್ತು ಹಾರ್ದಿಕ್ ಪಟೇಲ್ ಡಿಎನ್‌ಎಗೂ ಏನು ಸಂಬಂಧವೆಂಬುದು ಸ್ಪಷ್ಟವಾಗಿಲ್ಲ ಎಂದು ವಿಶ್ಲೇಷಣೆಯಲ್ಲಿ ಉಲ್ಲೇಖಿಸಲಾಗಿದೆ.

1948ರಲ್ಲಿ ನೃತ್ಯ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ದ ನೃತ್ಯಪಟು ಮೃಣಾಲಿನಿ ಸರಾಭಾಯಿ ಅವರನ್ನು ನೆಹರು ಅವರು ಅಭಿನಂದಿಸುತ್ತಿರುವ ದೃಶ್ಯ ಇದಾಗಿದೆ. ಮೃಣಾಲಿನಿ ಅವರ ತಾಯಿ ಮತ್ತು ಪತಿ ಇಬ್ಬರೂ ನೆಹರು ಜತೆ ಬಹಳ ಆತ್ಮೀಯತೆಯಿಂದ ಇದ್ದವರು. ಹೀಗಾಗಿ ನೆಹರು ಆಕೆಯನ್ನು ಬೆನ್ನುತಟ್ಟಿ ಅಭಿನಂದಿಸಿದ್ದರು. ಆದರೆ, ಈ ಚಿತ್ರವನ್ನು ಬಳಸಿಕೊಂಡು ಬಿಜೆಪಿ ಅವರ ತೇಜೋವಧೆ ಮಾಡುತ್ತಿದೆ ಎನ್ನಲಾಗಿದೆ.

ಜಾನ್ ಎಫ್‌ ಕೆನಡಿ ಅವರು 1962ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭ ಅವರ ಪತ್ನಿಯ ಹಣೆಗೆ ಸಾಂಪ್ರದಾಯಿಕ ತಿಲಕವಿಟ್ಟು ಅವರನ್ನು ನೆಹರು ಸ್ವಾಗತಿಸಿದ್ದರು. ಮಾಲವೀಯ ದೃಷ್ಟಿಯಲ್ಲಿ ಇದು ಅಪರಾಧವೇ ಎಂದು ವಿಶ್ಲೇಷಣೆಯಲ್ಲಿ ಪ್ರಶ್ನಿಸಲಾಗಿದೆ.

ಈ ಚಿತ್ರವು ನೆಹರು ಅವರು ಎಡ್ವಿನಾ ಮೌಂಟ್‌ಬ್ಯಾಟನ್‌ರ 18 ವರ್ಷ ವಯಸ್ಸಿನ ಮಗಳು ಪಮೇಲಾ ಮೌಂಟ್‌ಬ್ಯಾಟನ್‌ ಜತೆಗಿರುವುದಾಗಿದೆ. ನವದೆಹಲಿಯಲ್ಲಿ ಪಾಲಕರ ಜತೆ ಆಕೆಯನ್ನು ಕಳುಹಿಸಿಕೊಡುತ್ತಿರುವ ಚಿತ್ರವಾಗಿದೆ.

1995ರಲ್ಲಿ ನೆಹರು ಅವರ ಸೋದರಸೊಸೆ ನಯನ್‌ತಾರಾ ಸೆಹಗಲ್ ಅವರು ಲಂಡನ್ ವಿಮಾನ ನಿಲ್ದಾಣಕ್ಕೆ ಬಂದಾಗಿನ ಚಿತ್ರ ಇದಾಗಿದೆ. ಆಗ ಸೆಹಗಲ್ ಅವರು ನೆಹರುಗೆ ಮುತ್ತಿಕ್ಕಿದ್ದರು. ಸೆಹಗಲ್ ಅವರ ಅಮ್ಮ ವಿಜಯಲಕ್ಷ್ಮಿ ಪಂಡಿತ್ ಸಹ ಜತೆಗಿದ್ದುದನ್ನು ಚಿತ್ರದಲ್ಲಿ ಕಾಣಬಹುದು.

ಈ ಎಲ್ಲ ಚಿತ್ರಗಳನ್ನು ನೆಹರು ಅವರನ್ನು ಅವಹೇಳನ ಮಾಡಲು ಬಿಜೆಪಿಯು ಪದೇ ಪದೇ ಬಳಸಿಕೊಳ್ಳುತ್ತಿದೆ. ಈ ಹಿಂದೆಯೂ ಅನೇಕ ಬಾರಿ ಈ ಚಿತ್ರಗಳನ್ನು ಮುಂದಿಟ್ಟುಕೊಂಡು ದೇಶದi ಮೊದಲ ಪ್ರಧಾನಿಯನ್ನು ಅವಹೇಳನ ಮಾಡಲಾಗಿದೆ ಎಂದು ವಿಶ್ಲೇಷಣೆಯಲ್ಲಿ ಉಲ್ಲೇಖಿಸಲಾಗಿದೆ.

Comments

Popular posts from this blog

ಬಾಬಾ ಸಾಹೇಬರ ಈ 10 ನುಡಿಗಳು ಯಾವುದೇ ಸಮಾಜವನ್ನು ಬದಲಾಯಿಸಬಲ್ಲವು!

ಹಾಶಿಂಪುರ ಹತ್ಯಾಕಾಂಡಕ್ಕೆ 31 ವರ್ಷಗಳು.!

ಜಿಹಾದ್ ಎಂದರೇನು..!?