Posts

Showing posts from November, 2018

ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ನಾಡಿಗೆ ಬಗೆವ ದ್ರೋಹ: ಸಿದ್ದರಾಮಯ್ಯ

Image
ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ನಾಡಿಗೆ ಬಗೆವ ದ್ರೋಹ: ಸಿದ್ದರಾಮಯ್ಯ ‘ ಟಿಪ್ಪು ಸುಲ್ತಾನ್ ಒಬ್ಬ ದೇಶಪ್ರೇಮಿ, ಜಾತ್ಯತೀತ, ಮತ್ತು ಜನಪರ ಅರಸನಾಗಿದ್ದ’ ಟಿಪ್ಪು ಜಯಂತಿ ಆಚರಣೆ ಬಗ್ಗೆ ಬಿಜೆಪಿ ನಿಲುವು ಆತ್ಮವಂಚನೆಯಿಂದ ಕೂಡಿದ್ದಾಗಿದೆ. ಟಿಪ್ಪು ವಿರೋಧಿಗಳಿಗೆ ನಿಜವಾದ ಟಿಪ್ಪು ಸುಲ್ತಾನ್ ಕಾಣಬೇಕಾದರೆ ಕೋಮುವಾದದ ಕನ್ನಡಕ ಕಳಚಿಟ್ಟು ನೋಡಬೇಕಾಗುತ್ತದೆ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನನ್ನು ದೇಶಕ್ಕೆ ಅರ್ಪಿಸಿದ ಟಿಪ್ಪು ಸುಲ್ತಾನರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಟಿಪ್ಪುವಿಗೆ ಮಾತ್ರವಲ್ಲ ಈ ನಾಡಿಗೆ ಬಗೆವ ದ್ರೋಹ ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ. ನವೆಂಬರ್ 10, ಟಿಪ್ಪು ಜಯಂತಿಯ ಬಗ್ಗೆ ತನ್ನ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ‘ರಾಜ್ಯ ಸರ್ಕಾರ ಆಚರಿಸುತ್ತಿರುವುದು ಯಾವುದೇ ಒಂದು ಧರ್ಮಕ್ಕೆ ಸೇರಿದ ನಾಯಕನ ಜಯಂತಿಯಲ್ಲ’ ಎಂದು ರಾಜ್ಯದಲ್ಲಿ ಟಿಪ್ಪು ಜಯಂತಿಯನ್ನು ವಿವಾದದಂತೆ ಮಾಡಿರುವ ಬಿಜೆಪಿ ಮತ್ತು ಅದರ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ. ಒಬ್ಬ ದೇಶಪ್ರೇಮಿ, ಜಾತ್ಯತೀತ, ಮತ್ತು ಜನಪರ ಅರಸನಾಗಿದ್ದ ಟಿಪ್ಪುವಿನ ಜಯಂತಿ ಆಚರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಟಿಪ್ಪು ಅವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ಟಿಪ್ಪುವಿಗೆ ಮಾತ್ರವಲ್ಲ ಈ ನಾಡಿಗೆ ಬಗೆವ ದ್ರೋಹವೆಂದೂ ಹೇಳಿದ್ದಾರೆ.

ಇತಿಹಾಸ ಮರೆತ ಟಿಪ್ಪುವಿನ ಹಿಂದೂ ವೀರ ಸಂಗಾತಿಗಳು

Image
ಇತಿಹಾಸ ಮರೆತ ಟಿಪ್ಪುವಿನ ಹಿಂದೂ ವೀರ ಸಂಗಾತಿಗಳು... ಟಿಪ್ಪು ಸುಲ್ತಾನರ ಕೊನೆಯ ಯುದ್ಧ ಅರ್ಥಾತ್ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಇಂಚಿಂಚೂ ಬಿಡದೆ ಬ್ರಿಟಿಷ್ ಮತ್ತು ಫ್ರೆಂಚ್ ಇತಿಹಾಸಕಾರರು ಪ್ರತಿಯೊಂದನ್ನೂ ದಾಖಲಿಸಿದ್ದಾರೆ. ಟಿಪ್ಪುವಿನ ಬಗ್ಗೆ ಅತ್ಯಂತ ಮಹತ್ವದ ಚಾರಿತ್ರಿಕ ಕಾದಂಬರಿ ‘ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್’ ಬರೆದ ಭಗವಾನ್ ಶ್ಯಾಮದಾಸ್ ಗಿದ್ವಾನಿ ಅದಕ್ಕಾಗಿ ಅತೀ ಹೆಚ್ಚು ಅಧ್ಯಯನ ನಡೆಸಿದ್ದು ಫ್ರೆಂಚ್ ಮತ್ತು ಬ್ರಿಟಿಷ್ ಇತಿಹಾಸ ಗ್ರಂಥಗಳನ್ನಾಗಿದೆ. ಗಿದ್ವಾನಿ ಬರೆದಿದ್ದು ಒಂದು ಚಾರಿತ್ರಿಕ ಕಾದಂಬರಿಯಾದರೂ ಅವರು ಅದಕ್ಕೆ ಮಸಾಲೆ ತುಂಬಿಸುವ ಕೆಲಸ ಮಾಡಿಲ್ಲ ಎಂಬುವುದಕ್ಕೆ ಅವರು ಬಳಸಿದ ದಾಖಲೆಗಳೇ ಸಾಕ್ಷ್ಯ ಒದಗಿಸುತ್ತವೆ. ನಮ್ಮಲ್ಲಿ ಒಂದೋ ಟಿಪ್ಪುವನ್ನು ಅತಿಯಾಗಿ ವೈಭವೀಕರಿಸಲಾಗುತ್ತದೆ ಅಥವಾ ಅತಿಯಾಗಿ ದೂಷಿಸಲಾಗುತ್ತದೆ. ಇವೆರಡರ ಮಧ್ಯೆ ಹುದುಗಿರುವ ಸತ್ಯಗಳು ಅನೇಕ ಸಂದರ್ಭಗಳಲ್ಲಿ ಮಸುಕಾಗಿಬಿಡುವ ಸಾಧ್ಯತೆಗಳಿವೆ. ನಾವು ಟಿಪ್ಪುವಿಗೆ ದ್ರೋಹ ಬಗೆದ ಪೂರ್ಣಯ್ಯ ಮತ್ತು ಮೀರ್ ಸಾದಿಖರನ್ನು ಋಣಾತ್ಮಕ ಕಾರಣಗಳಿಗಾಗಿಯಾದರೂ ಆಗಾಗ ನೆನಪಿಸಿಕೊಳ್ಳುತ್ತೇವೆ ಆದರೆ ಟಿಪ್ಪುವಿಗಾಗಿ ಮತ್ತು ನಾಡಿಗಾಗಿ ಹೋರಾಡಿ ವೀರಮರಣವನ್ನಪ್ಪಿದ ಅದೆಷ್ಟೋ ಮಂದಿಗಳ ಹೆಸರು ಇತಿಹಾಸ ಗರ್ಭದಲ್ಲಿ ಹೂತು ಹೋಗಿವೆ. ಹಾಗೆ ಹುತಾತ್ಮರಾದ ಇಬ್ಬರು ವೀರಯೋಧರ ಕೊನೆಯ ಕ್ಷಣದ ಹೋರಾಟದ ಝಲಕ್ ಗಳನ್ನು ಇಲ್ಲಿ ದಾಖಲಿಸುತ್ತೇನೆ. ಮೀರ್ ಸಾದಿಖ್ ಮತ್

ಟಿಪ್ಪುಜಯಂತಿ ಇಷ್ಟವಿಲ್ಲವೆಂದರೆ, ಬಿಜೆಪಿಯರು ಮನೆಯಲ್ಲಿರಿ: ಸಿಎಂ ಕುಮಾರಸ್ವಾಮಿ...

Image
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ಬಿಜೆಪಿಗೆ ಇಷ್ಟವಿಲ್ಲ ಎಂದರೆ, ಮನೆಯಲ್ಲಿರಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಂಗಳವಾರ ನಗರದ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಟಿಪ್ಪು ಜಯಂತಿ ವಿಚಾರದಲ್ಲಿ ನಾನು ಎಂದಿಗೂ ವಿರೋಧ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ದೇಶದಲ್ಲಿ ಅನೇಕ ಧರ್ಮ ಜಾತಿಗಳಿವೆ. ಅವರವರ ಜಯಂತಿ ಮಾಡಿಕೊಳ್ಳಲು ಬಿಜೆಪಿ ವಿರೋಧವೇಕೆ ?. ಟಿಪ್ಪು ಜಯಂತಿ ಬಿಟ್ಟು ಶಾಂತಿ ಕದಡುವ ಯತ್ನ ಮಾಡಿದರೆ ಬಿಡುವುದಿಲ್ಲ. ಸಾರ್ವಜನಿಕ ಆಸ್ತಿ ಪಾಸ್ತಿ ನಾಶ ಸರಿಯಲ್ಲ ಎಂದು ಅವರು ಹೇಳಿದರು.