ಮಅದನಿ ಎಂಬ ಮುಸ್ಲಿಂ ನಾಯಕ ಹಾಗೂ ಧರ್ಮ ಗುರುವಿನ ಕರಾಳ ಕತೆ ಆರೋಪಿ (ಮಅದನಿಗೆ) ಗೊತ್ತಿಲ್ಲದ ತಮಿಳು ಭಾಷೆಯಲ್ಲಿ ಬರೆಯಲ್ಪಟ್ಟ 52 kg ಭಾರದ ಆರೋಪ ಪಟ್ಟಿ,ಅರೆಸ್ಟ್ ಮಾಡಿದ ಎರಡು ವರ್ಷದ ನಂತರ ಅಧಿಕೃತವಾಗಿ ಕೇಸ್ ಫೈಲ್ ಮಾಡಲಾಯಿತು.ಬಹುಷಃ ಇತಿಹಾಸದಲ್ಲೇ ಪ್ರಪ್ರಥಮವಾಗಿರಬೇಕು ಜೈಲಿಗಟ್ಟಿದ ಐದು ವರ್ಷದ ನಂತರವಷ್ಟೇ 'ವಿಚಾರಣೆ' ಕೂಡಾ ನಡೆಯುವುದು.ಜೀವನದ ಮೂರರಲ್ಲೊಂದು ಭಾಗ ಜೈಲಿನಲ್ಲೇ ಕೊಳೆಯಬೇಕಾದ ದುರವಸ್ಥೆ.. ಅಂಧತ್ವ ಭಾದಿಸಲ್ಪಟ್ಟ ಕಣ್ಣುಗಳು,ಡಯಾಬಿಟಿಸ್,ಪ್ರೆಶರ್,ಹೃದಯ ಸಂಬಂಧೀ ರೋಗಗಳು,ರಾಜಕೀಯ ಎದುರಾಳಿಗಳ ಆಕ್ರಮಣದಿಂದ ಬಲಕಾಲು ನಷ್ಟ ಹೊಂದಿ ವೀಲ್ಚಯರ್'ನಲ್ಲೇ ಜೀವಿಸುವ ಮನುಷ್ಯ.ಕೆಲವು ಕುತಂತ್ರಿಗಳಿಂದ ಸೃಷ್ಟಿಸಲ್ಪಟ್ಟ ಕೃತಕ ಪುರಾವೆಗಳ ಪೊಳ್ಳು ಆರೋಪಗಳಿಗೆ ಬದುಕಿನ ಬಹುತೇಕ ದಿನಗಳನ್ನು ಜೈಲಿನ ಕತ್ತಲಕೋಣೆಯಲ್ಲಿ ಕಳೆಯಬೇಕಾಗಿ ಬಂದ ಹತಭಾಗ್ಯ.. ಈ ಮೇಲಿನ ವಿವರಣೆ 'ಗ್ವಾಂಟೆನಾಮೋ' ಕಾರಾಗೃಹದಲ್ಲಿ ಬಂಧಿತನಾಗಿರುವ ಯಾವುದೋ ಆಫ್ರಿಕನ್ ಅಪರಾಧಿಯ ಕುರಿತೇನೂ ಅಲ್ಲ ಬದಲು ನೀತಿ ನ್ಯಾಯ ವ್ಯವಸ್ಥೆಯ ಸುಂದರ ಸಂವಿಧಾನವನ್ನು ಹೊಂದಿರುವುದಕ್ಕೆ ಹೆಮ್ಮೆ ಪಡುವ ನಮ್ಮದೇ ದೇಶದ ಇತಿಹಾಸದಲ್ಲೇ ಕಾನೂನಿನ ಕುತಂತ್ರದೊಳಗೆ ಸಿಲುಕಿ ಸಮಾನತೆಗಳಿಲ್ಲದ ಮಾನವ ಹಕ್ಕು ಉಲ್ಲಂಘನೆಗಳ ಸರಮಾಲೆಗಳನ್ನೇ ಅನುಭವಿಸಲ್ಪಟ್ಟ 'ಅಬ್ದುನ್ನಾಸರ್ ಮಅದನಿ' ಎಂಬ ಮನುಷ್ಯನ ಕುರಿತಾಗಿದೆ. ಜೈಲು ಜೀವನ ಕರ್ನಾಟಕಕ್ಕೆ ಸ್ಥಳಾಂತರಗೊ...